ಶನಿವಾರ, ಆಗಸ್ಟ್ 29, 2020
ಹೆಚ್ಚೇನು ಮಾಡಿಯೇನು ಕವನದ ಅನುವಾದ
https://sangaati.com/?p=10956
ಹೆಚ್ಚೆಂದರೇನು ಮಾಡಿಯೇನು?

ಅವರಂತೆ ತಣ್ಣೀರಲ್ಲಿ ಮಿಂದು
ನಲವತ್ತೆಂಟನೆಯ ದಿನದ
ವ್ರತ ಮುಗಿಸಿ,
ಆ ಕೋಟೆ ಕೊತ್ತಲಗಳ ದಾಟಿ
ಬೆಟ್ಟವೇರಿ ಗುಡ್ಡವಿಳಿದು, ಕಣ್ಗಾವಲ ತಪ್ಪಿಸಿ
ನಿನ್ನ ಬಳಿ ನಡೆದೇ….
ಬಂದೆನೆಂದು ಇಟ್ಟುಕೋ
ಹೆಚ್ಚೆಂದರೆ ನಾನಲ್ಲಿ
ಏನು ಮಾಡಿಯೇನು?
‘ಬಾಲಕನಾಗಿಹೆ ಅಯ್ಯಪ್ಪ’ ಈ
ಹಾಡು ಹಾಡು ಕೇಳಿ ಕೇಳಿ
ಇತ್ತೀಚೆಗೆ ನಿನ್ನ ಹಳೆಯದೊಂದು
ಪಟ ನೋಡಿದ ಮೇಲೆ
ನನ್ನ ಮಗನಿಗೂ..ನಿನಗೂ..
ಯಾವ ಪರಕ್ಕೂ ..ಉಳಿದಿಲ್ಲ ನೋಡು
ಎಷ್ಟೋ ವರ್ಷ ನಿಂತೇ ಇರುವೆ
ಬಾ ಮಲಗಿಕೋ ಎಂದು
ಮಡಿಲ ಚೆಲ್ಲಿ
ನನ್ನ ಮುಟ್ಟಿನ ಕಥೆಯ
ನಡೆಯುತ್ತಿರುವ ಒಳ ಯುದ್ಧಗಳ ವ್ಯಥೆಯ
ನಿನಗೆ ಹೇಳಿಯೇನು
ಹುಲಿ ಹಾಲನುಂಡ ನಿನಗೆ
ತಾಯ ಹಾಲ ರುಚಿ ನೋಡು
ಹುಳಿಯಾಗಿದೆಯೇನೋ ..
ಎನ್ನುತ್ತಲೇ
ತೇಗಿಸಲು ಬೆನ್ನ ನೀವಿಯೇನು
ದೃಷ್ಟಿ ತೆಗೆದು ನಟಿಗೆ ಮುರಿದು
ಎದೆಗೊತ್ತಿಕೊಂಡು,ತೆ
ಹಣೆಗೊಂದು ಮುತ್ತಿಕ್ಕಿ
ಥೇಟ್ ನನ್ನ ಮಗನಂತೆ ಎನ್ನುತ್ತ
ಹದಿನೆಂಟನೆಯ ಕೊನೆಯ ಮೆಟ್ಟಿಲ ಕೆಳಗಿಳಿದ ಮೇಲೂ….
ಮತ್ತೊಮ್ಮೆ ಮುಗುದೊಮ್ಮೆ ನಿನ್ನ
ತಿರುತಿರುಗಿ ನೋಡಿಯೇನು
ಈಗ ಹೇಳು
ನನ್ನ ಮುಟ್ಟು ನಿನಗೆ ಮೈಲಿಗೆಯೇನು?
What else can I do…
I may ,
Just like them
Dipping in cold water
Completing forty eight
Days of abstinence,
Crossing those fortresses
Climbing up and down the hillocks
Escaping all the surveillance
Come trekking to you..
But what else can I do there…
“You are still a child oh Aiyappa”
Listening to this hymn over and over
again and again,later seeing
An old pic of yours
See,there is no difference left
between you and my son.
I may ,
Ask you to rest in my lap
As you are standing still, since ages,
Then I may tell you the stories of
My menstruation pain
And internal conflicts.
I may ,
Breast feed the one
Who has tasted the tiger’s milk
Doubting, it has turned sour
I will massage your back
And make you burp.
I may,
After cracking my knuckles
To rid you off all the ill omen,
Hugging and kissing you on forehead, Descend the eighteen steps,
But will still turn and turn
And keep on looking at you..
Now tell me,
Does my menstruation defile you?
ಶನಿವಾರ, ಆಗಸ್ಟ್ 22, 2020
ಪರಿಸರ ಪ್ರಜ್ಞೆ ನಾಗರಿಕ ಪ್ರಜ್ಞೆ
ಮತ್ತೆ ಎಂದಿನಂತೆ ಪರಿಸರ ದಿನಾಚರಣೆ ಬಾಗಿಲಿಗೆ ಬಂದಿದೆ. ಪ್ರತೀ ವರ್ಷವೂ ಬರುತ್ತದೆ ,ನಾವುಗಳು ಪ್ರತಿವರ್ಷವೂ ಅದೇ ಅದೇ ಹಳತಾದ ಭಾಷಣಗಳು,ಅದೇ ಗಿಡನೆಡುವ ಕಾರ್ಯಕ್ರಮ ಮಾಡಿ ಅದನ್ನು ಕಳುಹಿಸಿ ಕೊಟ್ಟು,ಎಂದಿನಂತೆ ನಮ್ಮ ನಮ್ಮ ಅರಿವಿನ ಬಾಗಿಲು ಮುಚ್ಚಿಕೊಂಡು ,ನಮ್ಮ ದುರಾಸೆಯ ,ವಿಪರೀತ ವಸ್ತು ವ್ಯಾಮೋಹದ ಜೀವನ ಶೈಲಿಗೆ ಮರಳಿ ಹೋಗುತ್ತೇವೆ.
ಆದರೆ ಈ ಬಾರಿ ಪರಿಸರ ದಿನ ತಾನೊಂದೇ ಬಂದಿಲ್ಲ ಜೊತೆಯಲ್ಲಿ ಕರೋನ ಮಹಾಮಾರಿಯ ಕರೆತಂದಿದೆ. ಇನ್ನಾದರೂ ನಾವು ಎಚ್ಚೆತ್ತುಕೊಂಡು ನಮ್ಮ ಈ ಪರಿಸರವನ್ನ ಉಳಿಸುವೆಡೆಗೆ ದೃಢ ಸಂಕಲ್ಪ ಕೈಗೊಂಡು ಕಾರ್ಯ ಪ್ರವೃತ್ತರಾಗದೆ ಹೋದರೆ ನಮ್ಮೆಲ್ಲರ ವಿನಾಶ ಕಟ್ಟಿಟ್ಟ ಬುತ್ತಿ.
ಪರಿಸರದಲ್ಲಿ ಪ್ರತಿಯೊಂದೂ ಇನ್ನೊಂದರೊಂದಿಗೆ ಲಗತ್ತಿಸಿಕೊಂಡಿದೆ ಅಂತ ವಿಜ್ಞಾನ ಹೇಳುತ್ತದೆ.ಪರಿಸರದಲ್ಲಿ ಮಾನವನಿಗೆ ಎಷ್ಟು ಮಹತ್ವವಿದೆಯೋ ಒಂದು ಚಿಕ್ಕ ಇರುವೆಗೂ ಅಷ್ಟೇ ಮಹತ್ವವಿದೆ,ಜಗತ್ತಿನ ಅತ್ಯಂತ ಬೃಹತ್ ಜೀವಿಯಾದ ನೀಲಿ ತಿಮಿಂಗಿಲ ಎಷ್ಟು ಬೆರಗು ಹುಟ್ಟಿಸುವುದೋ ಅದಕ್ಕಿಂತ ಹೆಚ್ಚಿನ ಬೆರಗು , ದಿಗಿಲನ್ನು ಕಣ್ಣಿಗೇ ಕಾಣದ ಅತ್ಯಂತ ಸೂಕ್ಷ್ಮ ಜೀವಿಯಾದ ಕರೋನ ಎಂಬ ಒಂದು ವೈರಸ್ ಹುಟ್ಟಿಸಿ ಬಿಟ್ಟಿದೆ.
ಆದರೆ ಪರಿಸರದ ಸೂಕ್ಷ್ಮ ಪರಸ್ಪರ ಕೊಂಡಿಗಳನ್ನ ಅರಿಯದ ಮಾನವ ತನ್ನ ದುರಾಸೆಯಿಂದಾಗಿ,ತನಗೊಬ್ಬನಿಗೆ ಈ ಭೂಮಿ,ಅದರ ಎಲ್ಲ ಸಂಪನ್ಮೂಲ ಅನ್ನುವ ಅಹಂಕಾರದಿಂದ ವಿಪರೀತವಾಗಿ ಬಳಕೆ ಮಾಡುತ್ತಾ,ಅದರಿಂದ ತನ್ನ ಗೋರಿ ತಾನೇ ತೋಡಿ ಕೊಳ್ಳುತ್ತಾ ಸಾಗಿದ್ದಾನೆ.
ವಿಪರೀತ ಕೈಗಾರಿಕೀಕರಣ,ಅರಣ್ಯನಾಶ,ಅಭಿವೃದ್ದಿ
ಹೋಗುತ್ತಿವೆ.
ಸರಿಯಾದ ಸಮಯಕ್ಕೆ ಎಚ್ಚೆತ್ತುಕೊಂಡು ಪರಿಸರದ ಸೂಕ್ಷ್ಮ ಜೀವಜಾಲ ಸಮತೋಲನವನ್ನು ಕಾಪಾಡಿಕೊಂಡು ಹೋಗದಿದ್ದರೆ ,ನಮ್ಮ ಸುಂದರ ನೀಲಿಗೋಲವಾದ ಭೂಗ್ರಹ ಸೌರ ಮಂಡಲದ ಇತರೆ ಬರಡು ಗ್ರಹಗಳ ಸಾಲಿಗೆ ಸೇರುವ ದಿನ ದೂರವಿಲ್ಲ.
ಹಾಗಾಗಿ ನಮ್ಮ ಪರಿಸರವನ್ನು ಉಳಿಸುವ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯ ಪ್ರವೃತ್ತ ರಾಗ ಬೇಕಾಗಿರುವುದು ನಮ್ಮ ಅತ್ಯಂತ ಆದ್ಯಕರ್ತವ್ಯವಾಗಿದೆ.
ಪರಿಸರ ಸಂರಕ್ಷಣೆ ಕಾರ್ಯ ದಲ್ಲಿ ತೊಡಗಿಸಿಕೊಳ್ಳಲು
"ಸಾವಿರ ಮೈಲುಗಳ ಪ್ರಯಾಣ ವಾದರೂ ಒಂದು ಹೆಜ್ಜೆಯಿಂದ ಪ್ರಾರಂಭ ವಾಗಬೇಕು"ಅನ್ನುವ ಮಾತಿನಂತೆ ನಾವೆಲ್ಲರೂ ನಮ್ಮಿಂದ ಆಗುವ ಚಿಕ್ಕ ಚಿಕ್ಕ ಪ್ರಯತ್ನಗಳನ್ನ ಯಾಕೆ ಮಾಡಬಾರದು?
ಒಮ್ಮೆ ನಾನು ಕೆಲಸ ಮಾಡುವ ಶಾಲೆಯಿರುವ ಗ್ರಾಮದ ಪಂಚಾಯತ್ ನ ಅಭಿವೃದ್ದಿ ಅಧಿಕಾರಿ ಅಂದರೆ ಪಿ ಡಿ ಒ
ಶಾಲೆಗೆ ಬಂದು ಮಾತನಾಡುತ್ತಿರುವಾಗ,ಗ್ರಾಮದ ವಿದ್ಯುತ್ ಬಿಲ್ ಅಧಿಕ ಪ್ರಮಾಣ ದಲ್ಲಿ ಬಂದಿರುವುದರ ಬಗ್ಗೆ ಬೇಸರ ವ್ಯಕ್ತ ಪಡಿಸುತ್ತಾ,ನಮ್ಮೆಲ್ಲ ರೊಂದಿಗೆ ಮಾತನಾಡುತ್ತ "ನೋಡಿ ಮೇಡಂ,ಹಳ್ಳಿಯಲ್ಲಿ ಎಲ್ಲರೂ ಸಮಯಕ್ಕೆ ಸರಿಯಾಗಿ ಬೀದಿ ದೀಪಗಳನ್ನು ಹಾಕುವುದು,ಆರಿಸುವುದು ಮಾಡಬಹುದಿತ್ತು,ಕೆಲವು ಸಾರಿ ಸಂಜೆ ಐದು ಘಂಟೆಗೆ ಹಾಕಿ ಬೆಳಿಗ್ಗೆ ಎಂಟು ಗಂಟೆಯಾದರೂ ಕೆಲವು ಬೀದಿಗಳಲ್ಲಿ ದೀಪ ಉರಿಯುತ್ತಿರುವದನ್ನು ನೋಡಿದ್ದೇನೆ.ಎಷ್ಟೋ ಸಾರ್ವಜನಿಕ ನಲ್ಲಿಗಳಲ್ಲಿ ನೀರು ಹರಿದು ಹೋಗುತ್ತಿರುತ್ತದೆ,ಕಸ ಸಂಗ್ರಹಣೆ ಯ ವ್ಯಾನ್ ಬರುವ ತನಕ ಕಾಯುವ ವ್ಯವಧಾನವೂ ಕೆಲವರಿಗೆ ಇರುವುದಿಲ್ಲ,ಖಾಲಿ ಸೈಟ್ ಕಂಡರೆ ಸಾಕು ಕಸ ಎಸೆದು ಹೋಗುತ್ತಿರುತ್ತಾರೆ.ತಮ್ಮ ಅಕ್ಕ ಪಕ್ಕ ಚೆನ್ನಾಗಿ ಇಟ್ಟು ಕೊಳ್ಳುವ ನಾಗರಿಕ ಪ್ರಜ್ಞೆ ಬೇಡವೇ?ಇದೆಲ್ಲದಕ್ಕೆ ನಮ್ಮ ಪಂಚಾಯತ್ ಹಣವನ್ನು ಕಟ್ಟಬೇಕು.ಇಷ್ಟು ಸಣ್ಣ ಸಣ್ಣ ವಿಷಯಗಳ ಕಡೆಗೆ ನಮ್ಮ ಜನ ಗಮನ ಹರಿಸಿದರೆ ಸಾಕು,ಉಳಿತಾಯವಾಗುವ ಹಣವನ್ನು ಊರಿನ ಅಭಿವೃದ್ಧಿಗೆ ಬಳಸ ಬಹುದಲ್ಲವೆ"ಎಂದು ಹೇಳಿದರು.
ಹೌದಲ್ಲವೇ ಒಂದು ಚಿಕ್ಕ ಗ್ರಾಮಕ್ಕೆ ಅನ್ವಯಿಸುವುದು ಇಡೀ ಪ್ರಪಂಚಕ್ಕೆ ಅನ್ವಯಿಸುವುದಿಲ್ಲವೇ.ನಾವು ಕಸ ಹಾಕುತ್ತೇವೆ ನೀವು ಶುಚಿ ಮಾಡಿ ಅಂತ ಎಲ್ಲಾ ವಿಷಯಕ್ಕೂ ಸರ್ಕಾರವನ್ನು ದೂರುವುದು ಸರಿಯೇ?ನಾಗರಿಕರಾಗಿ ನಮ್ಮ ಕರ್ತವ್ಯಗಳೂ ಕೂಡ ಕೆಲವು ಇಲ್ಲವೇ?
ಪ್ರತಿನಿತ್ಯ ಸಂಜೆಯ ವಾಕ್ ಮಾಡುವಾಗ ರಸ್ತೆ ಬದಿಯಲ್ಲಿ ಎಸೆದಿರುವ ಕಸ ನೋಡಿದಾಗ ತಮ್ಮ ಕಸವನ್ನು ತಾವೇ ಸರಿಯಾಗಿ ನಿರ್ವಹಣೆ ಮಾಡಲಾಗದ ಜನರ ಬಗ್ಗೆ ಅಪಾರ ಕೋಪ ಬರುತ್ತದೆ.ಮನೆಯಲ್ಲಿ ಕಸದ ನಿರ್ವಹಣೆ ಏನೂ ಅಂತಹ ರಾಕೆಟ್ ಸೈನ್ಸ್ ಅಲ್ಲ ಬಿಡಿ.ಚಿಕ್ಕ ಚಿಕ್ಕ ವಿಷಯಗಳ ಕಡೆಗೆ ಗಮನ ನೀಡಿದರೆ ಸಾಕು ಪ್ರತಿ ಮನೆಯು ಶೂನ್ಯ ಕಸ ಉತ್ಪಾದಿಸುವ ಮನೆಯಾಗಬಹುದು.ಅಂಗಡಿಯಿಂದ ಯಾವುದೇ ಸಾಮಗ್ರಿ,ಹಣ್ಣು ತರಕಾರಿ ತರುವಾಗ ಒಂದು ಬಟ್ಟೆಯ ಕೈಚೀಲ ತೆಗೆದು ಕೊಂಡು ಹೋದರಾಗದೆ?ಮನೆಯಲ್ಲೇ ಹಳೇ ನ್ಯೂಸ್ ಪೇಪರ್ ಬಳಸಿ ಚಿಕ್ಕ ಚಿಕ್ಕ ಪೇಪರ್ ಬ್ಯಾಗ್ ತಯಾರಿಸಿ ಕೊಂಡು ಅಂಗಡಿ ಸಾಮಗ್ರಿಗಳನ್ನ ತಂದರೆ ಅನಗತ್ಯವಾಗಿ ಪ್ಲಾಸ್ಟಿಕ್ ಕವರ್ ಗಳನ್ನೂ ಬಳಸುವುದು ತಪ್ಪುತ್ತದೆ..ಮನೆಯಲ್ಲೇ ತಾರಸಿಯಲ್ಲಿ,ಬಾಲ್ಕನಿಯಲ್ಲಿ ಇಲ್ಲವೇ ಹೊರಗಡೆ ಅಂಗಳದಲ್ಲೇ ಒಂದು ನಾಲ್ಕಾರು ಗಿಡಗಳ ಕುಂಡಗಳನ್ನಿಟ್ಟು ಕೊಂಡರೆ ಮನೆಯ ತರಕಾರಿಗಳ ಹಣ್ಣಿನ ಸಿಪ್ಪೆಯನ್ನು ಗೊಬ್ಬರವಾಗಿ ಬಳಸಬಹುದು. ಕೈತೋಟವಿದ್ದರೆ ಇನ್ನೂ ಚೆನ್ನ. ಸಾವಯವ ಗೊಬ್ಬರ ತಯಾರಿಸಿ ಗಿಡಗಳಿಗೆ ಬಳಸಬಹುದು. ಊಟಾ ಮಾಡುವಾಗ ಸ್ವಲ್ಪವೂ ತಟ್ಟೆಯಲ್ಲಿ ಬಿಡದಂತೆ ತಿನ್ನುವ ಅಭ್ಯಾಸ ನಾವೂ ಮಾಡಿಕೊಂಡು ನಮ್ಮ ಮಕ್ಕಳಿಗೂ ಮಾಡಿಸಿದರೆ ಅದರಿಂದ ಎಷ್ಟೋ ಕಸದ ಉತ್ಪತ್ತಿ ಆಗುವುದು ನಿಲ್ಲುವುದಿಲ್ಲವೇ.
ಇನ್ನ ಮರು ಬಳಕೆಗೆ, ಮರು ಚಕ್ರೀಕರಣಕ್ಕೆ ಒಳಪಡಬಲ್ಲ ವಸ್ತುಗಳನ್ನು ಬಳಸಿ ಹಲವು ಉಪಯುಕ್ತ ವಸ್ತುಗಳನ್ನು ತಯಾರಿಸಲು ಈಗ ಎಷ್ಟೊಂದು ಅವಕಾಶ,ಮಾರ್ಗದರ್ಶನ ಲಭ್ಯವಿದೆ.ಅಂತರ್ಜಾಲ ಹುಡುಕಿದರೆ ಸಾಕು ಎಷ್ಟೊಂದು ಮಾಹಿತಿ ಈ ತ್ಯಾಜ್ಯ ವಸ್ತುಗಳ ಮರುಬಳಕೆ ಬಗ್ಗೆ ಸಿಗುತ್ತದಲ್ಲವೆ.
ಮನೆಯ ಒಳಾಂಗಣ ಅಲಂಕಾರಕ್ಕೆ ಲಕ್ಷಗಟ್ಟಲೆ ವ್ಯಯ ಮಾಡುವ ಜನ , ಆ ವೆಚ್ಚದ ಸ್ವಲ್ಪ ಭಾಗವನ್ನದರೂ ಮಳೆನೀರು ಕುಯಿಲಿಗೆ,ಸೌರ ವಿದ್ಯುತ್ ವ್ಯವಸ್ಥೆಗೆ ಬಳಸಿದರೆ ಎಷ್ಟು ಚೆನ್ನ.
ಕೆಲವರಿಗಂತೂ ವಾಹನಗಳಿಲ್ಲದೆ ಒಂದು ನಾಲ್ಕು ಹೆಜ್ಜೆಯೂ ನಡೆಯಲಾಗದು.ನಡೆದು ಹೋಗಿಯೇ ತಲುಪಬಲ್ಲ ಜಾಗಗಳಿಗೂ ಬೈಕ್,ಕಾರ್ ತೆಗೆಯುವವರು ತಮ್ಮ ಈ ದುರಭ್ಯಾಸ ಎಂದು ಬಿಡುವರೋ.ಚಿಕ್ಕ ಚಿಕ್ಕ ದೂರಗಳಿಗೆ ಕಾಲ್ನಡಿಗೆ ಇಲ್ಲವೇ ಬೈಸಿಕಲ್ ಬಳಸಿದರೆ ಹಣವೂ ಉಳಿದು,ಆರೋಗ್ಯವೂ ಹೆಚ್ಚುತ್ತದೆ.
ಮನೆಯ ಬಳಿಯ ಬೀದಿದೀಪಗಳನ್ನು ಅನಾವಶ್ಯಕವಾಗಿ ಉರಿಸುವುದನ್ನು ತಪ್ಪಿಸುವುದು,ನಮ್ಮ ನಮ್ಮ ಮನೆಗಳಲ್ಲೇ ವಿದ್ಯುತ್ ಮತ್ತು ನೀರಿನ ಮಿತಬಳಕೆ,ನಮ್ಮ ಮನೆಯ ಕಸದ ಸೂಕ್ತ ವಿಲೇವಾರಿ ನಾವೇ ಮಾಡಿಕೊಳ್ಳುವುದು ಇದೆಲ್ಲ ಅತ್ಯಂತ ಚಿಕ್ಕ ಚಿಕ್ಕ ವಿಷಯಗಳಾದರೂ ,ಸಮುದಾಯದ ಪ್ರತಿಯೊಬ್ಬರೂ ಮಾಡಿದರೆ ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಅವುಗಳು ದೊಡ್ಡ ಕೊಡುಗೆಯನ್ನೇ ನೀಡಬಲ್ಲವು.
ಮಕ್ಕಳಿಗೆ ಎಳವೆಯಿಂದಲೆ ಪರಿಸರ ಪ್ರಜ್ಞೆ ಖಂಡಿತವಾಗಿ ಬೆಳೆಸ ಬೇಕಾಗಿರುವುದು ಎಲ್ಲಾ ಹೆತ್ತವರ ಮತ್ತು ಶಿಕ್ಷಕರ ಕರ್ತವ್ಯ.
ನಾನು ಕೆಲಸ ಮಾಡುವ ಶಾಲೆಯಲ್ಲಿ ಯಾವುದೇ ಮಗುವಿನ ಇಲ್ಲವೇ ಶಿಕ್ಷಕರ ಜನ್ಮ ದಿನವನ್ನು ಗಿಡ ನೆಡುವ ಮೂಲಕ ಆಚರಿಸಲಾಗುತ್ತಿದೆ .ಮಕ್ಕಳು ಅವರ ಜನ್ಮದಿನದಂದು ಚಾಕೋಲೇಟ್ ಹಂಚುವ ವಾಡಿಕೆ ಇತ್ತು.ಆದರೆ ಮಕ್ಕಳು ಚಾಕೋಲೇಟ್ ತಿಂದ ಬಳಿಕ ಅದರ ಪ್ಲಾಸ್ಟಿಕ್ ಕವರ್ ಎಲ್ಲೆಂದರಲ್ಲಿ ಬಿಸಾಡುತ್ತಿದ್ದರು.ದೊಡ್ಡ ಗಾತ್ರದ ಪ್ಲಾಸ್ಟಿಕ್ ಕಸ ಮರು ಬಳಕೆ ಮಾಡುವುದು ಸಾಧ್ಯ ಆದರೆ ಲೆಕ್ಕಕ್ಕೆ ಸಿಗದ ಈ ಚಿಕ್ಕ ಚಿಕ್ಕ ಪ್ಲಾಸ್ಟಿಕ್ ತುಣುಕುಗಳು ಸುಲಭವಾಗಿ ಮಣ್ಣು ಸೇರಿ ಹೆಚ್ಚಿನ ಪ್ರಮಾಣದ ಹಾನಿ ಉಂಟು ಮಾಡುತ್ತವೆ.ಆದ್ದರಿಂದ ಮಕ್ಕಳಲ್ಲಿ ಪರಿಸರ ಜಾಗೃತಿಯ ಅರಿವನ್ನು ಮೂಡಿಸುವ ಸಲುವಾಗಿ ನಮ್ಮ ಶಾಲೆಯನ್ನು ಸಂಪೂರ್ಣ ಪ್ಲಾಸ್ಟಿಕ್ ಮುಕ್ತ ಶಾಲೆಯನ್ನಾಗಿ ಮಾಡುವ ಗುರಿ ಸಾಧನೆಗಾಗಿ ಮಕ್ಕಳು ತಮ್ಮ ಹುಟ್ಟು ಹಬ್ಬದ ದಿನ ಶಾಲೆಯಲ್ಲಿ ಚಾಕಲೇಟ್ ಹಂಚುವ ಬದಲು ಒಂದು ಗಿಡ ನೀಡುವಂತೆ ಮಕ್ಕಳಿಗೆ ತಿಳಿಸಿದಾಗ ಅವರಿಂದ ಅತ್ಯಂತ ಉತ್ಸಾಹದ ಪ್ರತಿಕ್ರಿಯೆ ಬಂದಿತು. ಮಕ್ಕಳು ಗಿಡ ತಂದು ಅವರೇ ನೆಟ್ಟು ,ವರ್ಷವಿಡೀ ಅದನ್ನು ನೋಡಿ ಕೊಳ್ಳುವಂತೆ ಪ್ರೋತ್ಸಾಹಿಸುವ ಈ ಕಾರ್ಯಕ್ರಮ ಮಕ್ಕಳಿಗೆ ಬಹಳ ಮುದ ನೀಡಿದೆ.
ಮರು ಚಕ್ರಿಕರಣ ದ ಬಗೆಗೂ ಶಾಲೆಯಲ್ಲಿ ಮಾಹಿತಿ ನೀಡಲಾಗುತ್ತಿದೆ. ಬಳಸಿ ಎಸೆದ ಪ್ಲಾಸ್ಟಿಕ್ ನೀರಿನ ಬಾಟಲ್ ಗಳು ನಮ್ಮ ಮಕ್ಕಳ ಕೈಯಲ್ಲಿ ಹೂ ಬೆಳೆಸುವ ಕುಂಡಗಳಾಗಿವೆ.ಅಕ್ಷರ ದಾಸೋಹ ಅಡಿಗೆ ಮನೆಯ ಅಕ್ಕಿ ಬೇಳೆ ತೊಳೆದ ನೀರು ಈ ಹೂ ಕುಂಡಗಳ ಗಿಡಗಳ ಪಾಲು.ಅಡಿಗೆ ಮನೆಯ ತರಕಾರಿ ಸಿಪ್ಪೆಗಳನ್ನು ಗೊಬ್ಬರದ ಗುಂಡಿಗೆ ಹಾಕುತ್ತಿದ್ದಾರೆ..ಶಾಲೆಯಲ್ಲಿ ಪೇಪರ್ ಹರಿಯುವುದೂ ನಿಷಿದ್ಧ.ಒಂದು ಹಾಳೆ ಹರಿದು ವ್ಯರ್ಥಮಾಡಿದರೆ ಅದು ಮರವೊಂದರ ರೆಂಬೆ ಮುರಿದಂತೆ ಎಂದು ಮಕ್ಕಳ್ಳಲ್ಲಿ ಹೇಳಿದ್ದರಿಂದ ಈಗ ಶಾಲೆಯಲ್ಲಿ ಬೀಳುವ ಕಸದ ಪ್ರಮಾಣ ಇಲ್ಲವೆಯಿಲ್ಲ ಎಂಬಷ್ಟು ಕಡಿಮೆಯಾಗಿದೆ.ಮಕ್ಕಳಲ್ಲಿ ಎಳವೆ ಯಿಂದಲೆ ಪರಿಸರ ಜಾಗೃತಿ ಮೂಡಿಸುವುದು ಇಂದಿನ ತುರ್ತು..ಈ ನಿಟ್ಟಿನಲ್ಲಿ ನಮ್ಮ ಶಾಲೆಯ ಎಲ್ಲ ಶಿಕ್ಷಕರು ಸಾಧ್ಯವಾದಷ್ಟು ಪ್ರಯತ್ನಿಸುತ್ತಿದ್ದಾರೆ.
ನಮ್ಮ ಈ ಎಲ್ಲಾ ಪ್ರಯತ್ನಕ್ಕೆ ಪೋಷಕರೂ ಕೂಡ ಸಹಕಾರ ನೀಡುತ್ತಿದ್ದಾರೆ.ಗಿಡ ನೆಡುವ ಕಾರ್ಯಕ್ರಮ ಮಕ್ಕಳಿಗೆ ಎಷ್ಟು ಖುಷಿ ನೀಡುತ್ತದೆ ಎಂದರೆ ತಮ್ಮ ತಮ್ಮ ಹುಟ್ಟಿದಹಬ್ಬಕ್ಕೆ ಶಾಲೆಗೆ ಗಿಡ ನೀಡುವಾಗ ಪುಟಾಣಿಗಳ ಮುಖದಲ್ಲಿಅರಳುವ ನಗು ಸಂಜೆ ಶಾಲೆ ಬಿಡುವವರೆಗೂ ನಳನಳಿಸುತ್ತಲೇ ಇರುತ್ತದೆ.
Sent from my Huawei Mobile
ಗುರುವಾರ, ಆಗಸ್ಟ್ 20, 2020
ಕಿಟಕಿ ಗೋಡೆ ಅನುವಾದ
A WINDOW----A WALL
I, a window,
Kept closed since ages,
Have deep inside,
Stale air of aeons whirling,
Skeletons and spirits twirling.
Drunk with the scent of darkness.
Outside,there is a non unbarked
Banyan tree, With props deep rooted,
Is branching wide in the fresh air,
Each branch has a nest,
Each nest has an incubating
hatching bird.
Tappings at the door,
Who that could be?
A twig or a spirited bird?
Each chirping bird
Seems to have its own tune.
What new colour
These swaying sprigs get,?
By the air flowing on its own.
But I was never opened.
A window kept closed for centuries
Was I, unaware of my outside,
But inside,
Gloomy darkness and stale air
Are strangling me to choke.
The craziness brought by the
Rolling waves of time
Is conserving the past,
Unheard,unseen.
The wall attached to my frame
Often moans and groans,
About the weight hanging
On a nail stuck deep,
And of laden emotions,
In a jeremiad.
This upright, innocent,
Well built wall
Was newly painted
But ill fated.
Have to be demolished
To be newfangled
Needs to be pulverized
To Crush it's existence
To dust.
I atleast have doors
That could be opened,
So that,
Once in a while,
I might be able to see
A streak of lightning,
A flock of birds flying
And listen to a melody,
To keep me moving.
Some day
Some one may scare,
And drive away
These rusted skeletons
And swinging spirits.
Those who come,
With the address of the wall
To demolish,
Shall fling open
My faded, loosened doors,
Tear off the curtains.
For not letting any spider
To weave again,
Let the morning sun and
The blowing wind
Fill me up.
Because,
I am an unfolding window..
Translated by Samatha.R
ಕಿಟಕಿ -- ಗೋಡೆ
ನಾನೊಂದು ಕಿಟಕಿ; ಮುಚ್ಚಿಯೇ
ಇದ್ದೇನೆ ಶತಮಾನಗಳಿಂದ
ಗತಕಾಲದ ಗಾಳಿ ಒಳಗೆ
ಸುಳಿದಾಡುತ್ತಾ ಕತ್ತಲ ಘಮಲಿನ
ಅಮಲಲಿ ಉರುಳಾಡುತ್ತಾ
ಎದ್ದೆದ್ದು ಕುಣಿಯುವ
ಆತ್ಮಗಳೂ ಅಸ್ಥಿಪಂಜರಗಳೂ
ನನ್ನೊಳಗಿವೆ.
ವಿಶಾಲ ಬಿಳಲುಗಳ ಆಲದ
ಮರವೊಂದು ಟಿಸಿಲೊಡೆದು
ತೊಗಟೆ ಕಳಚಿಕೊಳ್ಳದೆ ಬೇರೂರಿ
ಮುಚ್ಚಿದ ಕಿಟಕಿಯಾಚೆ
ಸ್ವಚ್ಛ ಗಾಳಿಗೆ ಚಿಗುರು ಚಿಗಿಸಿ
ಹಕ್ಕಿ ಗೂಡಿಗೆ ಟೊಂಗೆ ಚಾಚಿದೆ.
ಒಂದೊಂದು ಟೊಂಗೆಗೂ
ಗೂಡು. ಗೂಡೊಳಗೆ ಕಾವು
ಕೂತ ಹಸಿ ಬಾಣಂತಿ ಹಕ್ಕಿ
ಕಿಟಕಿ ಕುಟುಕಿದ ಸದ್ದು;
ಚಾಚಿದ ಟೊಂಗೆಯೋ
ಚೈತನ್ಯದ ಹಕ್ಕಿಯೋ ತಿಳಿಯದು.
ಪ್ರತೀ ಶಬ್ದ ಮಾಡುವ ಹಕ್ಕಿಗೂ
ಅದೇನು ರಾಗವೋ
ಸುಮ್ಮಗೆ ಬೀಸುವ ಗಾಳಿಗೆ
ತಲೆದೂಗುವ ಟೊಂಗೆಗಳಿಗೂ
ಅದೇನು ಹೊಸ ರಂಗೋ
ನಾನು ಮಾತ್ರ ತೆರೆಯುವುದಿಲ್ಲ.
ಶತಮಾನಗಳಿಂದ ಮುಚ್ಚಿದ
ಕಿಟಕಿ. ನನ್ನಾಚೆ ನನಗೆ ಅರಿವಾಗದೇ
ಒಳಗಿನ ಗವ್ವುಗತ್ತಲೆ
ಕಮಟು ವಾಸನೆ ಕತ್ತು ಹಿಸುಕಿ ಕುತ್ತು
ತರುತ್ತಿವೆ. ಕಾಲದ ಅಲೆ ಉರುಳಿ
ತನ್ನೊಡನೆ ತಂದಿಟ್ಟ ಮರಳುತನಕ್ಕೆ
ಈಗ ಕಿವೂಡೂ ಕುರುಡೂ
ಸಾತ್ ಕೊಡುತ್ತಾ ಕೂಡುತ್ತಿವೆ
ಜತನ ಮಾಡುತ್ತಾ ಗತವನ್ನು.
ನನ್ನ ಚೌಕಟ್ಟಿನಾಚೆ ನಿಂತ
ಗಟ್ಟಿ ಗೋಡೆ ಆಗಾಗ್ಗೆ ಅಪಾರ
ವೇದನೆಯಲಿ ಮುಖ
ಕಿವುಚಿ ನರಳಿ ನುಡಿಯುತ್ತದೆ
ಯಾರೋ ಈಗಷ್ಟೆ ಕೆತ್ತಿ
ಹೋದರೆಂದು ಮೊಳೆ ಜಡಿದು
ಭಾರಗಳನು ತೂಗುಹಾಕಿ
ಭಾವನೆಗಳನು ಹೇರಿದರೆಂದು
ಆಕ್ರಮಿಸಿಕೊಂಡ ಆಕ್ರಂದನದ
ದನಿಯಲಿ..
ನೆಟ್ಟಗೆ ನಿಂತ ಪಾಪದ ಗಟ್ಟಿ
ಗೋಡೆ ; ಹೊಸ ಬಣ್ಣ ಬಳಿದರೂ
ಬದಲಾಗದ ಹಳೆಯ ಹಣೆಬರಹ.
ನವೀನತೆಗೆ ಒಡೆಯಬೇಕು, ಕುಟ್ಚಿ
ಕೆಡವಿ ಪುಡಿಗಟ್ಟಬೇಕು. ಅಸ್ತಿತ್ವದ
ನಿರಾಕರಣೆ ಆಗಲೇಬೇಕು.
ನನಗಾದರೂ ಬಾಗಿಲುಗಳಿವೆ
ತೆರೆಯಬಹುದು
ಒಮ್ಮೆ ಜಗ್ಗನೆ ಹೊಳೆವ ಮಿಂಚು
ಪಕ್ಕನೆ ಹಾರುವ ಹಕ್ಕಿ ಸಾಲನು
ನಾನಾದರೂ ಕಾಣಬಹುದು.
ನಿಧಾನದ ಆಲಾಪಕ್ಕೆ ತೆರೆದು
ತಲೆತೂಗಬಹುದು.
ಯಾರಾದರು ಒಮ್ಮೆ
ನನ್ನೊಳಗೆ ಹಣಕಿ ಈ ಓಲಾಡುವ
ಆತ್ಮಗಳನೂ ಕಿಲುಬುಗಟ್ಟಿದ
ಅಸ್ಥಿಪಂಜರಗಳನೂ ಒಮ್ಮೆ ಜಾಡಿಸಿ
ಓಡಿಸಿ ಬಿಡಬಹುದು.
ಗೋಡೆ ಕೆಡವಲು
ವಿಳಾಸ ಹುಡುಕಿ ಬರುವವರು
ಬಣ್ಣ ಮಾಸಿ ಸಡಿಲಾದ ನನ್ನ
ಬಾಗಿಲುಗಳನು
ದೂಡಲಿ ಪರದೆ ಹರಿದು ಹೊಸ
ಜೇಡ ಮತ್ತೆ ಬಲೆ ಹೆಣೆಯದಂತೆ
ಮಾಡಲಿ ಎಳೆ ಬಿಸಿಲು
ಹೊಸ ಗಾಳಿ ತುಂಬಿ ಬರಲಿ
ನಾನು ತೆರೆದುಕೊಳ್ಳುವ ಕಿಟಕಿ
ವಸುಂಧರ ಕದಲೂರು
******************************
ಧ್ಯಾನ ಅನುವಾದ
https://sangaati.com/?p=10131
ಕವಿತೆ
ಧ್ಯಾನ
ಕನ್ನಡಮೂಲ: ಸುನೀತಾ ಕುಶಾಲನಗರ
ಇಂಗ್ಲೀಷಿಗೆ:ಸಮತಾ ಆರ್.


ಧ್ಯಾನ
ಎಲ್ಲೆಡೆ ಗವ್ ಎನ್ನುವಾಗಲೂ
ಅದೇನೋ ಧ್ಯಾನ
ಮನೆಯೊಳಗಿದ್ದರೂ ನುಗ್ಗಿ
ಬರುವ ಕವಿತೆ
ಆಕಾಶದಂತೆ ಆವರಿಸಿ
ನಿತ್ಯ ಬೆಳದಿಂಗಳು
ಋತುಚಕ್ರ ಉರುಳಿದಂತೆ
ಋತುಸ್ರಾವ ವ್ಯತ್ಯಾಸ
ಬಣ್ಣದ ಕನಸುಗಳಿಗೆ
ಅದೆಷ್ಟು ಕೂಸುಗಳ ಕೇಕೆ
ಜತೆಯಾದ ಕ್ಷಣ ಕ್ಷಣವೂ
ಕಣ ಕಣಕೂ ಹಿತ
ಮತ್ತೊಮ್ಮೆ ಬದುಕಿಬಿಡೆಂದು
ಚಾಚುವ ಕೈ
ಕಣ್ಣ ಸುತ್ತಿದ ಬಳೆಯಾಕಾರದ
ಕಪ್ಪನೂ ನೇವರಿಸುವ
ಕೂದಲ ಬಣ್ಣದ ಲೇಪನಕೆ
ಹೊಸ ಹೊಳಪು
ಭೂತ ಭವಿಷ್ಯದ
ಹಂಗ ತೊರೆವ ವರ್ತಮಾನ
ತೀರಾ ಖಾಸಗಿ ಬದುಕೇ
ಆದರೂ ಸದ್ದಿಲ್ಲದೆ
ಮುಟ್ಟುಗೋಲಾಗುವ ಮುಟ್ಟಿಗೂ
ಹುಟ್ಟುತ್ತಿದೆ ಹೊಸಹುರುಪು
ದಿನ,ದಿನಾಂಕಗಳ
ಗಡಿದಾಟಿ ಬರುವ
ಲವಲವಿಕೆಯ ಮತ್ತು.
A Musing..
Far and wide surrounded by gloom,
But still have some kind of musing.
A poem is invading even inside the home,
Day to day covering like a moonlit sky.
Like babies giggling in
Their rainbow dreams
Drowning in pleasure bit by bit.
In every intimate moment.
A held out hand is making me alive again.
Even the coloured hair caressing
The dark circles of eyes
Is gleaming with new light.
As the seasons turn
So the periods change,
The present is though
Too personal of a life,
Is careless of future and past,
Silently forfeited monthly cycle
Is giving birth to a new spirit.
A vigorous spree is crossing
All the borders of
Time and space…
*********************
ಗುರ್ ಮೆಹರ್ ಅಂತರಂಗ ಅನುವಾದ
https://sangaati.com/?p=10656
ಗುರ್ ಮೆಹರ್ ಅಂತರಂಗ
ಕನ್ನಡ ಮೂಲ: ಶೋಭಾ ಹೀರೆಕೈ
ಇಂಗ್ಲೀಷಿಗೆ: ಸಮತಾ ಆರ್


ಗುರ್ ಮೆಹರ್ ಅಂತರಂಗ
ಅವರಿವರ ಬಂದೂಕ ತುದಿಯಲ್ಲಿ
ಹೂವಿನ ಮೊನಚಿತ್ತೇ?
ಇಲ್ಲವಲ್ಲ
ಮತ್ತೇ
ಯುದ್ಧವನ್ನು ಯುದ್ಧವಲ್ಲದೆ
ಇನ್ನೇನನ್ನಲಿ?
ಯಾವ ಕಣಿವೆ ಬದುಕಿಸುವುದು
ನಾ ಕಳಕೊಂಡ
ವಾತ್ಸಲ್ಯವನ್ನು ?
ಯಾವ ಕುರ್ಚಿಯ ಬಳಿ
ಕೇಳಲಿ ನ್ಯಾಯ?
ಬೇಕೇ?
ನಮ್ಮ ಬಿಸಿ ರಕ್ತಕೂ
ಕೊಳಚೆಯ ಗಬ್ಬು
ಕಪ್ಪು -ಕೇಸರಿಗಳ ಜಿದ್ದಾ ಜಿದ್ದು
ಬಣ್ಣದ ಮೇಲೂ ರಾಡಿಯ
ಎರಚುತಿರುವವರಾರೋ?
ಈಚೆಗಿರುವುದೇ ಅಚೆ
ಆಚೆಗಿರುವುದೇ ಈಚೆ
ಈಚೆ ಅಚೆಗಳಾಚೆ
ಅದೇ ಮಣ್ಣು ,ಅದೇ ನೀರು
ಅದೇ ಗಂಧ, ಅದೇ ಗಾಳಿ
ರಕ್ತ ಬೇರೆಯೇ ಮತ್ತೆ?
ಬೇಕೆ ಯುದ್ಧ?
ನನ್ನಂಥ ತಬ್ಬಲಿಗಳ ಕೇಳಿ
ಹೇಳು ಅಶೋಕ
‘ಕಳಿಂಗ’ ನಿನ್ನ ಕಾಡಿದಂತೆ
‘ಕಾರ್ಗಿಲ್ ‘ ನನ್ನ ಕಾಡುತ್ತ
ಯುದ್ಧವನ್ನು ಯುದ್ಧವೆನ್ನದೆ
ಇನ್ನೇನನ್ನಲಿ?
—–
(ಗುರ್ ಮೆಹರ್: ಕಾರ್ಗಿಲ್ ಯುದ್ಧದಲ್ಲಿ ತಂದೆಯನ್ನು ಕಳೆದುಕೊಂಡು ಅನಾಥಳಾದ ಮಗಳು)
Quest of Gur Mehr..
Did the tips of theirs and our guns
Have the sharpness of a petal?
No..never..
Then what else can I call
A war other than a war?
Which valley will revive
The affection that I lost
Which chair shall I approach for just?
Do we need the stench of the sewage
Fight of the black and saffron
To taint our fresh warm blood?
Who is throwing slime on even the colours
Whatever is here, it’s also there,
Whatever is there it’s also here,
Beyond here and there
Soil, water,odour and air, are all same,
Then how can the blood be different?
Need a war?
Ask orphans like me.
Tell me Ashoka
Just like Kalinga haunted you
Will the Kargil haunt me..
What else can I call a war
Other than a War…
ಬಾವೀಕಟ್ಟೆ ಅನುವಾದ
https://sangaati.com/?p=10540
ಬಾವಿ ಕಟ್ಟೆ
ಕನ್ನಡ ಮೂಲ: ಸ್ಮಿತಾ ಅಮೃತರಾಜ್.ಸಂಪಾಜೆ
ಇಂಗ್ಲೀಷಿಗೆ: ಸಮತಾ ಆರ್.


ಗುದ್ದಿ ಗುದ್ದಿ ಆಳಕ್ಕೆ ಅಗೆದು
ಸಿಕ್ಕ ಜೀವ ಜಲಕ್ಕೆ
ಅತ್ತ ಇತ್ತ ಮಿಸುಕಾಡದಂತೆ
ಕಟ್ಟಿದ್ದು ಕಟ್ಟೆ.
ನೆಟ್ಟ ದಿಟ್ಟಿಗೆ ಒಂದು ಹಿಡಿ
ಆಗಸ ಬಿಟ್ಟರೆ
ಆಕೆ ತರುವ ಕೊಡದೊಂದಿಗಷ್ಟೇ
ಹೇಗೋ ಬೆಳೆದದ್ದು ನಂಟು.
ಅದೆಂತಹ ಆತುರ ಬಿಂದಿಗೆಗೆ
ಕಂಠಕ್ಕೆ ಹಗ್ಗ ಬಿಗಿಸಿಕೊಳ್ಳುತ್ತಾ
ಹಾಗೇ ಇಳಿಬಿಡುವ ಹೊತ್ತಿಗೆ
ಕೈಯ ಹಿಡಿತವನ್ನೇ ಸಡಿಲಿಸಿ
ರೊಯ್ಯನೆ ಡುಬುಕಿ ಹೊಡೆದಾಗ
ಕೊಡ ಸೇರಿ ಜಗತ್ತು ನೋಡುವ
ಕಾತರಕ್ಕೆ ಬಾವಿಯ ಮೈ ತುಂಬಾ
ಅಲೆ.
ಅನ್ನಕ್ಕೆ ಸಾಂಬಾರಿಗೆ ಕಾಫಿಗೆ
ಚಹಕ್ಕೆ ನೀರು ಸದ್ದಿಲ್ಲದೇ
ಕಲಬೆರಕೆಯಾಗುವ ಸಂಕಟಕ್ಕೆ
ಕುದಿ ಮತ್ತಷ್ಟು ಹೆಚ್ಚುತ್ತಿದೆ.
ಖಾಲಿಯಾಗುವ ಖುಷಿಗೆ
ಕೊಡ ಇಂಚಿಂಚೇ ಮೈ ಅಲಗಿಸಿ ಕೊಳ್ಳುತ್ತಿದೆ
ಇತ್ತ ಬಾವಿ ಹೆಜ್ಜೆ ಸಪ್ಪಳಕ್ಕೆ
ಕಿವಿ ತಾಗಿಸಿ ಕುಳಿತಿದೆ.
ಈ ಕೊಡದ ನೀರು
ಗಿಡದ ಬುಡಕ್ಕೋ
ಅಡುಗೆ ಮನೆಯ ವ್ಯಂಜನಕ್ಕೋ?
ಕುತೂಹಲ ತಣಿದ ದಿನ
ಕಣ್ಣು ಹೊಳಪು ಕಳೆದುಕೊಂಡು
ಬಿಡುತ್ತದೆ.
ಮತ್ತೆ ಕೊಡ ತುಂಬಿಕೊಳ್ಳುತ್ತಿದೆ
ಡುಬು ಡುಬು ಎದೆಬಡಿಯುವ
ಒಡಲಾಳದ ಸದ್ದು
ಎಲ್ಲಿಯದ್ದು .? ಬಿಂದಿಗೆಯದ್ದಾ..?
ಬಾವಿಯದ್ದಾ..?
ಅರೆ!
ನನ್ನೆದೆಯೇಕೆ ಹೀಗೆ
ಬಡಿದುಕೊಳ್ಳುತ್ತಿದೆ ಈ ಹೊತ್ತು .
**************************
A stone lined well
Digging and digging deep down
Found the elixir of life,
Not to make it waggle
A stone lined well was built.
Other than a piece of sky
Left for the direct sight,
Got attached to a pitcher,
Brought by her
How hurried this pitcher is,
When let to climb down,
With a tightening rope around the neck,
Loosening the grip, dives deep within.
Then with the eagerness to see,
The world through this pitcher,
The well trembles
With waves all around.
When used quietly to make
rice,curry,coffee or tea,
The agony of being tainted,
boils the water up.
The pitcher is moving inch by inch
With the joy of getting emptied.
Here the well is all ears,
Eagerly waiting for,
The rustling by the steps.
Whether this pitcher will
Water a plant
Or a dish in the kitchen.?
The moment this query gets quenched
The eyes may loose the shine.
The pitcher is getting filled again,
From where does this
Dub dub sound, thumping the heart
deep within, is coming?
From the pitcher or the well ?
Hey,why my heart is beating
So much at this hour…
********************************************
ಉಪ್ಪಿನ ಕಾಯಿಗೆ ಒಂಚೂರು ಅನ್ನ...ಸುರಹೊನ್ನೆ
ಉಪ್ಪಿನ ಕಾಯಿಗೆ ಒಂಚೂರು ಅನ್ನ.. "ಸ್ವಲ್ಪ ಕ್ಯಾಲೆಂಡರ್ ನೋಡೆ,ಹತ್ತನೇ ತಾರೀಕು ಯಾವ ವಾರ ಅಂತ"ಎಂದು ಒಂದು ದಿನ ಇವರು ಬೆಳಿಗ್ಗೆ ಬೆಳಿಗ್ಗೆ ಯೇ ದೇವರ ಮನೆಯ...
-
ಸಂಗಾತಿ ಸಾರ್ಥಕ ಬದುಕಿನ ಸಾಹಿತ್ಯ ಸಂಗಾತಿ Toggle navigation Home ಬೇಲಿ ಬೇಲಿ July 29, 2020 ಅನುವಾದ ಅನುವಾದಿತ ಕವಿತೆ ಕನ್ನಡ ಮೂಲ: ಸುನೀತ ಕುಶಾಲನಗರ ಇಂಗ...
-
ಸುರಹೊನ್ನೆ ಲಹರಿ 17 ಕೋರೋನ ಕಾಲದ ಕೆಲ ಬಿಡಿ ಚಿತ್ರಗಳು. BY SAMATHA R, SAMATHAYUVARAJ02@GMAIL.COM · JULY 9, 2020 ನಾಗಲೋಟದಿಂದ ಓಡುತ್ತಿದ್ದ ಪ್ರಪಂಚವನ್ನ...
-
ಸುರಹೊನ್ನೆ ಲಹರಿ 22 ಮೊದಲ ಶಾಲೆಯ ನೆನೆಯುತ್ತಾ… BY SAMATHA R, SAMATHAYUVARAJ02@GMAIL.COM · JUNE 11, 2020 “ಅಮ್ಮ ಫೋನ್ ಕೊಡು,ಆನ್ಲೈನ್ ಕ್ಲಾಸ್ ಶುರುವಾಗು...

